ರಾಬರ್ಟ್‍ಸನ್, ತಾಮಸ್ ವಿಲಿಯಮ್
1829 - 71. ಇಂಗ್ಲೆಂಡಿನ ನಾಟಕಕಾರ. ನಟನೊಬ್ಬನ ಮಗನಾದ ಈತ ನಟನಾಗಿ ವೃತ್ತಿಜೀವನ ಪ್ರಾರಂಭಿಸಿದ. ಅನಂತರ ಅಭಿನಯ ಬಿಟ್ಟು ನಾಟಕಗಳ ರಚನೆಗೆ ತೊಡಗಿದ. ಡೇವಿಡ್ ಗಾರಿಕ್ (864) ಇವನ ಮೊದಲ ಕೃತಿ ಇದಕ್ಕೆ ಇವನಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಆದರೆ ಇವನ ಮುಖ್ಯವಾದ (ನ್ಯಾಚುರಲಿಸಮ್) ಬಳಸಲು ಇವನು ಮಾಡಿದ ಮೊದಲನೆಯ ಪ್ರಯೋಗವಿದು, ನಾಟಕದ ಪರಿಣಾಮಕ್ಕೆ ವಸ್ತು ಅಥವಾ ಅಸಹಜ ಸನ್ನಿವೇಶಗಳನ್ನು ಅವಲಂಬಿಸದೆ ಪಾತ್ರಗಳ ಸಹಜತೆಯನ್ನು ಬಳಸಿದುದು ಈ ಕೃತಿಯ ಗಮನಾರ್ಹ ಸಾಧನೆ. ಅವರ್ಸ್ (18560, ಕ್ಯಾಟ್ (1867), ಪ್ಲೇ (1858), ಸ್ಕೋಲ್ (1869), ಎಂ. ಪಿ. (1870) -ಇವು ಇವನ ಇತರ ಕೃತಿಗಳು. ವಸ್ತುವಿನ ನಿರೂಪಣೆ. ಪಾತ್ರಸ್ಟಷ್ಟಿಗಳಲ್ಲಿ ಗಣನೀಯವಾದುದೇನೋ ಇಲ್ಲದಿದ್ದರೂ ಅವರ್ಸ್ ಮತ್ತು ಕ್ಯಾಸ್ಟ್ ನಾಟಕಗಳು ನಿರೂಪಣೆಯ ದೃಷ್ಟಿಯಿಂದ ಗಮನಾರ್ಹ. ರಂಗಭೂಮಿಯ ಮೇಲೆ ನಟನ ಸಹಾಯದಿಂದ ನಗುವನ್ನುಂಟುಮಾಡಬಲ್ಲ ವಿನೋದನಾಟಕಗಳು, ಪ್ರದರ್ಶನಗಳು ವಿಪುಲವಾಗಿದ್ದ ಕಾಲದಲ್ಲಿ ಸಹಜವೆನ್ನಿಸುವ ಪಾತ್ರಗಳು ಮತ್ತು ನಡೆವಳಿಕೆಯನ್ನು ಬಳಸಿ ಹಾಸ್ಯವನ್ನು ಸೃಷ್ಟಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ.				  
 (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ